ಸೌತೆಕಾಯಿ ತಂಬುಳಿ ಸೌತೆಕಾಯಿಯನ್ನು ಉಪಯೊಗಿಸಿ ಮಾಡುವ ಪಾನಿಯ. == ಬೇಕಾಗುವ ಸಾಮಾಗ್ರಿಗಳು == ಸೌತೆಕಾಯಿ - 1/2 ಕಪ್ ತೆಂಗಿನಕಾಯಿ - 1/2 ಕಪ್ ಸಾಸಿವೆ - 1 ಚಮಚ ಮೆಣಸು - 3 ರಿಂದ 4 ಮೊಸರು - 1 ಕಪ್ ಅರಸಿಣ ಹುಡಿ - 2 ಸಣ್ಣ ಚಮಚ ಉಪ್ಪು ರುಚಿಗೆ ತಕ್ಕಷ್ಟು == ಮಾಡುವ ವಿಧಾನ == ಮೊದಲಿಗೆ ಸೌತೆಕಾಯಿಯನ್ನು ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿಕೊಳ್ಳಬೇಕು, ಹಣಿ ಮೆಣಸನ್ನು ಬೀಜ ತೆಗೆದು ಎಣ್ಣೆಯಲ್ಲಿ ಹುರಿದುಕೊಂಡು ಇಟ್ಟುಕೊಳ್ಳಬೇಕು, ಸ್ವಲ್ಪ ಕಾಯಿತುರಿಯನ್ನು ತೆಗೆದುಕೊಳ್ಳಬೇಕು. ಮೊದಲಿಗೆ ಸೌತೆಕಾಯಿ, ಕಾಯಿತುರಿ, ಮೆಣಸು ಹಾಕಿ ಮಿಕ್ಸಿ ಮಾಡಿಕೊಳ್ಳಬೇಕು. ತೀರ ಪೇಸ್ಟ್ ಅಂತೆ ಮಾಡದೇ ಚೂರು ತೆಳುವಾಗಿ ನೀರು ಬೆರಿಸಿಕೊಂಡು ರುಬ್ಬಿದ ಸೌತೆಕಾಯಿ ಮಿಶ್ರಣ ತೆಗೆದುಕೊಳ್ಳಬೇಕು ನಂತರ ಮಜ್ಜಿಗೆ ಅಥವಾ ಮೊಸರು ಸೇರಿಸಿಕೊಳ್ಳಬೇಕು. == ಬೇರೆ ಬಾಷೆಯಲ್ಲಿ ಸೌತೆಕಾಯಿ ತಂಬುಳಿ == ತೌತೆ ತಂಬುಲಿ - ತುಳು == ಉಲ್ಲೇಖಗಳು ==